Tuesday, March 23, 2010

ಚಂದ್ರ ಬಂಧನ(ಕವನ)

ಚಂದ್ರ ಬಂಧನ(ಕವನ)

ಮಹಡಿಯ ಮೇಲೆ ನಿಂತು ಚಂದ್ರನನ್ನೇ ನೋಡುತ್ತಿದ್ದೆ

ಅವನು ಯಾರಿಗೋ ಕಾಯುತ್ತಿದ್ದ

ಮಾತನಾಡಿಸಿದರೆ ಮಾತನಾಡುತ್ತಿಲ್ಲ

ಕೂಗಿದರೆ ಓಗೊಡುತ್ತಿಲ್ಲ

ನಗಿಸಿದರೆ ನಗುತ್ತಿಲ್ಲ

ಸುಮ್ಮನೆ ಬಿಮ್ಮನೆ ನಿಂತಲ್ಲಿ ನಿಂತೇ ಇದ್ದ

ನಾನು ಕರೆದು ಕೂಗಿದೆ

ಊಹುಂ, ಆತ ನನ್ನೆಡೆಗೆ ನೋಡಲೇ ಇಲ್ಲ

ನಾನು ಪಕ್ಕಕ್ಕೆ ತಿರುಗಿ ನೋಡಿದೆ

ಅಂಗಾತ ಮಲಗಿದ್ದ ನನ್ನ ಮನದನ್ನೆಯ

ನೇತ್ರಗಳಲ್ಲಿ ಅವನು ನಗುತ್ತಿದ್ದ..!

ನಾನವನನ್ನು ನನ್ನಾಕೆಯ ಅಕ್ಷುಗಳಿಗೆ

ಚುಂಬಿಸುವ ನೆಪದಲ್ಲಿ ಬಂಧಿಸಿಟ್ಟೆ.. !!!!



--------ಮ.ನಾ.ಕೃಷ್ಣಮೂರ್ತಿ

No comments:

Post a Comment